ಚಿತ್ರ: ಇದು ಎಂಥ ಪ್ರೇಮವಯ್ಯ!
ಸಾಹಿತ್ಯ: ಭರತ್ ಡಿ.
ಸಂಗೀತ: ಗುರುಕಿರಣ್
ಗಾಯನ: ಚಿತ್ರ ಕೆ.ಎಸ್., ಉನ್ನಿ ಕೃಷ್ಣನ್

ನಿನ್ನ ಆಸೆಗಳೆ ..
ನನ್ನ ಕುಸುಮಗಳೇನು
ಪ್ರೇಮದ ತೋಟದಲಿ..

ನಿನ್ನ ಕನಸುಗಳೆ ..
ನನ್ನ ಸೊಗಸುಗಳೇನೊ
ಭಾವದ ಲೋಕದಲಿ

ನಿನ್ನ ಕಣ್ಣಿನ ಕಾಂತಿಯ ತಾರೆಯ ಮೀರಿ
ಮಿಂಚಿದೆ ಚೆಲುವಲಿ!
ಓ ಓ ಓ.. ನಿನ್ನ ಆಸೆಗಳೆ ನನ್ನ ಕುಸುಮಗಳೇನೊ
ಪ್ರೇಮದ ತೋಟದಲಿ 
ನಿನ್ನ ಕನಸುಗಳೆ .. ನನ್ನ ಸೊಗಸುಗಳೇನು
ಭಾವದ ಲೋಕದಲಿ!

ಸಾವಿರ ಜನರು ಸಾವಿರ ಹೇಳಲಿ ..
ಪ್ರೀತಿಯ ರಾಜನು ನೀನೇನೆ
ಯಾವುದೆ ನೋವು ಮನಸನು ಕಾಡಲಿ ..
ಮಾನಸ ರಾಣಿಯು ನೀನೇನೆ
ಈ ಸೆರೆ ಸುಖವು ತೋರದು ಎಲ್ಲು
ಬಾಳಿನ ಪಯಣದಿ!

ಓ ಓ ಓ.. ನಿನ್ನ ಆಸೆಗಳೆ 
ನನ್ನ ಕುಸುಮಗಳೇನು
ಪ್ರೇಮದ ತೋಟದಲಿ!

ಜೀವಕೆ ಜೀವ ಮೀಸಲು ಮಾಡುವೆ..
ನಲ್ಮೆಯ ಬದುಕಲಿ ಒಂದಾಗಿ
ತೋಳಿನ ಹಾರ ಕೊರಳಿಗೆ ಹಾಕುವೆ ..
ನಿನ್ನಯ ಪ್ರೀತಿಯ ಹೂವಾಗಿ
ಪ್ರಾಯದ ಸವಿಗೆ ಚುಂಬನ ಚಂದ
ಹೃದಯದಿ ಬೆಸೆದಿರೆ!

ಓ ಓ ಓ.. ನಿನ್ನ ಆಸೆಗಳೆ ನನ್ನ ಕುಸುಮಗಳೇನೊ
ಪ್ರೇಮದ ತೋಟದಲಿ 
ನಿನ್ನ ಕನಸುಗಳೆ .. ನನ್ನ ಸೊಗಸುಗಳೇನು
ಭಾವದ ಲೋಕದಲಿ!

ನಿನ್ನ ಕಣ್ಣಿನ ಕಾಂತಿಯ ತಾರೆಯ ಮೀರಿ
ಮಿಂಚಿದೆ ಚೆಲುವಲಿ!
ಓ ಓ ಓ.. ನಿನ್ನ ಆಸೆಗಳೆ ನನ್ನ ಕುಸುಮಗಳೇನು
ಪ್ರೇಮದ ತೋಟದಲಿ 
ನಿನ್ನ ಕನಸುಗಳೆ .. ನನ್ನ ಸೊಗಸುಗಳೇನೊ
ಭಾವದ ಲೋಕದಲಿ!

Category: ಕನ್ನಡ ಚಿತ್ರಸಾಹಿತ್ಯ
Category: ಇದು ಎಂಥ ಪ್ರೇಮವಯ್ಯ! ಚಿತ್ರ
Category: ಭರತ್ ಡಿ. ಸಾಹಿತ್ಯ
ವರ್ಗ: ಚಿತ್ರ ಕೆ.ಎಸ್. ಗಾಯನ
ವರ್ಗ: ಉನ್ನಿ ಕೃಷ್ಣನ್ ಗಾಯನ